background

Felicitation to the Corporators

Felicitation to the newly elected Corporators was arranged by the Catholic Sabha Angelore on 01 December 2019.

ಗಾರ್ಡಿಯನ್ ಏಂಜಲ್ಸ್ ಚರ್ಚ್ ನಾಗುರಿ ಇದರ ಸಹಯೋಗದಲ್ಲಿ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ ಆಂಜೆಲೋರ್ ಘಟಕದ ವತಿಯಿಂದ ನೂತನವಾಗಿ ಚುನಾಯಿಸಲ್ಪಟ್ಟ ಸ್ಥಳೀಯ ಕಾರ್ಪೋರೇಟರ್ ಗಳನ್ನು ಆಂಜೆಲೋರ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಸ್ಥಳೀಯ ಕಾರ್ಪೋರೇಟರ್ ಗಳಾದ

1. ಶ್ರೀ ಕೇಶವ - ಮರೋಳಿ ವಾರ್ಡ್

2. ಶ್ರೀ ಪ್ರವೀಣ್ ಚಂದ್ರ ಆಳ್ವ- ಕಂಕನಾಡಿ ವಾರ್ಡ್

3. ಶ್ರೀ ಸಂದೀಪ್ ಗರೋಡಿ ಕಂಕನಾಡಿ ವೆಲೆನ್ಸಿಯ ವಾರ್ಡ್

4. ಶ್ರೀಮತಿ ಶೋಭ ಪೂಜಾರಿ ಅಳಪೆ ದಕ್ಷಿಣ ವಾರ್ಡ್

5. ಶ್ರೀಮತಿ ರೂಪಶ್ರೀ ಪೂಜಾರಿ ಅಳಪೆ ಉತ್ತರ ವಾರ್ಡ್.

6. ಶ್ರೀಮತಿ ಚಂದ್ರಾವತಿ ವಿಶ್ವನಾಥ ಕಣ್ಣೂರು ವಾರ್ಡ್ ಉಪಸ್ತಿತರಿದ್ದರು.

ಆಂಜೆಲೋರ್ ಚರ್ಚ್ ಧರ್ಮ ಗುರುಗಳಾದ ವಂದನೀಯ ವಿಲಿಯಂ ಮಿನೇಜಸ್ ಮಾತನಾಡಿ ಜನಸಾಮಾನ್ಯರ ಬೇಡಿಕೆಗಳಿಗೆ ಸ್ಪಂದಿಸಿ ಪ್ರಾಮಾಣಿಕ ಸೇವೆಯಿಂದ ತಮ್ಮ ಅಧಿಕಾರವಧಿಯಲ್ಲಿ ವಾರ್ಡ್ ಗಳಲ್ಲಿ ಹೆಚ್ಚಿನ ಅಭಿವ್ರಧ್ಧಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಪೋರೇಟರ್ಗಳ ಪರವಾಗಿ ಶ್ರೀ ಪ್ರವೀಣ್ ಚಂದ್ರ ಆಳ್ವ , ಶ್ರೀಮತಿ ರೂಪಶ್ರೀ ಪೂಜಾರಿ ಮತ್ತು ಶ್ರೀಮತಿ ಚಂದ್ರಾವತಿ ವಿಶ್ವನಾಥ ಮಾತನಾಡಿದರು. 

ಆಂಜೆಲೋರ್ ಚರ್ಚ್ ಧರ್ಮ ಗುರುಗಳಾದ ವಂದನೀಯ ವಿಲಿಯಂ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು. ವಂದನೀಯ ಗುರುಗಳಾದ ಡೆನ್ಜಿಲ್ ಲೋಬೊ, ಶ್ರೀ ರೋಶನ್ ಪತ್ರಾವೊ, ಶ್ರೀ ಆಲ್ಬರ್ಟ್ ಲಸ್ರಾದೊ, ಶ್ರೀಮತಿ ಡೋರಾ ರೊಡ್ರಿಗಸ್ ಉಪಸ್ತಿತರಿದ್ದರು. 

ಶ್ರೀ ಆಲ್ಬರ್ಟ್ ಲಸ್ರಾದೊ ಸ್ವಾಗತಿಸಿದರು, ಶ್ರೀ ವಿನ್ಸೆಂಟ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.


ವರದಿ: ಫೆಲಿಕ್ಸ್‌ ಮೋರಸ್‌, ನಾಗುರಿ.

a a a a a j j j j j j j j j