ಮಂಗಳೂರು ಧರ್ಮ ಪ್ರ್ಯಾಂತ್ಯದ ಲಾವ್ದಾತೊ ಸಿ ಸಮಿತಿಯ ಅಂಗವಾಗಿ ಗಾರ್ಡಿಯನ್ ಏಂಜಲ್ಸ್ ಚರ್ಚ್ ಆಂಜೆಲೊರ್ ಇದರ ವತಿಯಿಂದ ದಿನಾಂಕ 08-07-2020 ರಂದು ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶ್ರೀಮತಿ ಜೋಯ್ಸ್ ರವರು ಭಕ್ತಿ ಗೀತೆಯ ಮೂಲಕ ಕಾರ್ಯಕ್ರಮದ ಮೇಲೆ ದೇವರ ಆಶೀರ್ವಾದವನ್ನು ಕೋರಿದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಕಾರ್ಪೊರೇಟರ್ ಶ್ರೀ ಕೇಶವ ಮರೋಳಿ ಹಾಗೂ ಶ್ರೀ ಸಂದೀಪ್ ಗರೋಡಿ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ನೊಯೆಲ್ ಪಿಂಟೊರವರು ನೆರೆದ ಸರ್ವರನ್ನು ಸ್ವಾಗತಿಸಿದರು. ಶ್ರೀ ಕೇಶವ ಮರೋಳಿಯವರು ಮಾತನಾಡಿ ವನಮಹೋತ್ಸವ ಹಾಗೂ ಪರಿಸರ ಜಾಗೃತಿಯ ಬಗ್ಗೆ ಚಿಂತನೆಯನ್ನು ಮಂಡಿಸಿದರು. ಧರ್ಮ ಗುರುಗಳಾದ ವಂದನೀಯ ವಿಲಿಯಂ ಮಿನೇಜಸ್ ರವರು ಮಾತನಾಡಿ ಪರಿಸರ ಜಾಗೃತಿಯ ಜೊತೆಗೆ ಚರ್ಚ್ ಆವರಣದಲ್ಲಿ ಸರಿಸುಮಾರು 350 ಸಸಿಗಳನ್ನು ನೆಡಲಾಗಿದೆ. ಹಾಗೂ ಇಂಗು ಗುಂಡಿಗಳನ್ನು ಮಾಡಲಾಗಿದೆ. ಎಂದು ತಿಳಿಸಿದರು. ಅತಿಥಿಗಳು ಸಾಂಕೇತಿಕವಾಗಿ ಚರ್ಚ್ ಆವರಣದಲ್ಲಿ ಗಿಡಗಳನ್ನು ನೆಟ್ಟು ವನಮಹೋತ್ಸವದ ಅರ್ಥವನ್ನು ಸಾರಿದರು. ಚರ್ಚ್ ನ 21 ವಾಳೆಯ ಪ್ರತಿಯೊಬ್ಬ ಸದಸ್ಯರಿಗೂ ಒಂದೊಂದು ಗಿಡವನ್ನು ನೀಡುವುದರ ಮೂಲಕ ತಂತಮ್ಮ ಮನೆಗಳಲ್ಲಿ ಗಿಡನೆಟ್ಟು ಪೋಷಿಸಿ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ವಹಿಸುವಂತೆ ಕೋರಲಾಯಿತು. ಶ್ರೀ ಫೆಲಿಕ್ಸ್ ಮೋರಸ್ ರವರು ನೆರೆದ ಸರ್ವರನ್ನು ವಂದಿಸಿದರು. ಶ್ರೀಮತಿ ಲೊಲಿನಾ ಲೋಬೊರವರು ಕಾರ್ಯಕ್ರಮ ನಿರೂಪಿಸಿದರರು.